ಕೇದಾರ್‌ ಮಹಾದೇವ್ ಜಾಧವ್‌ , ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಭಾರತದ ಮದ್ಯಮ ಕ್ರಮಾಂಕದ ಬಲಗೈ ಆಟಗಾರ. ಇವರು ಬಲಗೈ ಆಫ್ ಬ್ರೇಕ್ ಬಾಲರ್. ರಣಜೀ ಟ್ರೋಫೀಯಲ್ಲಿ ಮಹಾರಾಷ್ಟ್ರ ತಂಡಕ್ಕೆ ಆಡುತ್ತಾರೆ. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು 2013-06-22 ವೇಬ್ಯಾಕ್ ಮೆಷಿನ್ ನಲ್ಲಿ. ತಂಡಕ್ಕೆ ಆಡುತ್ತಾರೆ. == ಆರಂಭಿಕ ಜೀವನ == ಕೇದಾರ ರವರು ಮಾರ್ಚ್ ೨೬, ೧೯೮೫ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು.ನಾಲ್ಕು ಮಕ್ಕಳಲ್ಲಿ ಇವರು ಕಿರಿಯವರು. ತಂದೆ ಮಹಾದೇವ್ ಜಾಧವ್ ಮಹಾರಾಷ್ಟ್ರದ ವಿದ್ಯತ್ ಮಂಡಳಿಯಲ್ಲಿ ಗುಮಾಸ್ತರಾಗಿದ್ದರು. ಕೇದಾರ್ ರವರು ೨೦೦೪ರಲ್ಲಿ ಮಹಾರಾಷ್ಟ್ರದ ೧೯ರ ವಯ್ಯೋಮಿತಿ ತಂಡಕ್ಕೆ ಆಯ್ಕೆ ಆದರು. == ವೃತ್ತಿ ಜೀವನ == ಕೇದಾರ್ ರವರು ೨೦೦೭-೦೮ರ ರಣಜಿ ಟ್ರೋಫೀಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. ೨೦೧೨ರ ರಣಜಿಯಲ್ಲಿ ಇವರು ತಮ್ಮ ಮೊದಲನೇ ತ್ರಿಶತಕ ಬಾರಿಸಿದರು. === ಐಪಿಎಲ್ ಕ್ರಿಕೆಟ್ === ಮಾರ್ಚ್ ೨೫, ೨೦೧೭ರಂದು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಡೆಲ್ಲಿ ಡೇರ್ ದೆವಿಲ್ಸ್ ತಂಡದಿಂದ ಪಾದಾರ್ಪಣೆ ಮಾಡಿದರು. ತಮ್ಮ ಮೊದಲನೆ ಪಂದ್ಯದಲ್ಲಿ ೨೯ ಎಸೆತಗಳಿಂದ ಅರ್ಧ ಶತಕ ಸಿಡಿಸಿ ಅಜೇಯರಾಗಿ ಉಳಿದರು. ಈ ಪಂದ್ಯದಲ್ಲಿ ಇವರು ೫ ಬೌಂಡರಿ ಹಾಗು ೨ ಸಿಕ್ಸರ್ ಹೊಡೆದಿದ್ದರು. ಈ ಪಂದ್ಯಕ್ಕೆ ಇವರಿಗೆ ಪಂದ್ಯ ಶ್ರೇಷ್ಟ ಪುರಸ್ಕಾರ ಸಿಕ್ಕಿತು. ನಂತರ ಇವರು ಕೊಚ್ಚಿ ಟಸ್ಕರ್ಸ್ ಕೇರಳ ತಂಡಕ್ಕೆ ಆಡಿದರು. ಅನಂತರ ಮತ್ತೆ ಡೆಲ್ಲಿ ತಂಡಕ್ಕೆ ಭಿಕರಿಯಾದರು. ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡಕ್ಕೆ ಆಡುತ್ತಾರೆ. === ಅಂತರರಾಷ್ಟ್ರೀಯ ಕ್ರಿಕೆಟ್ === ನವೆಂಬರ್ ೧೬, ೨೦೧೪ರಲ್ಲಿ ಶ್ರೀ ಲಂಕಾ ವಿರುಧ್ಧ ನಡೆದ ೫ನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ಜುಲೈ ೧೭, ೨೦೧೫ರಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪ್ರಥಮ ಟಿ-೨೦ ಪಂದ್ಯದಿಂದ ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಗೆ ಪಾದಾರ್ಪನೆ ಮಾಡಿದರು. ಏಕದಿನ ಕ್ರಿಕೆಟ್ ನಲ್ಲಿ ಇವರು ೨ ಶತಕವನ್ನ ಬಾರಿಸಿದ್ದಾರೆ. == ಪಂದ್ಯಗಳು == ಏಕದಿನ ಕ್ರಿಕೆಟ್ : ೧೦ ಪಂದ್ಯಗಳು ಟೆಸ್ಟ್ ಕ್ರಿಕೆಟ್ : ೦೨ ಪಂದ್ಯಗಳು ಟಿ-೨೦ ಕ್ರಿಕೆಟ್ : ೦೨ ಪಂದ್ಯಗಳು ಐಪಿಎಲ್ ಕ್ರಿಕೆಟ್ : ೧೫ ಪಂದ್ಯಗಳು === ಶತಕಗಳು === ಏಕದಿನ ಪಂದ್ಯಗಳಲ್ಲಿ : ೦೨ === ಅರ್ಧ ಶತಕಗಳು === ಏಕದಿನ ಪಂದ್ಯಗಳಲ್ಲಿ : ೦೩ ಟಿ-೨೦ ಪಂದ್ಯಗಳಲ್ಲಿ : ೦೧ ಐಪಿಎಲ್ ಪಂದ್ಯಗಳಲ್ಲಿ : ೦೩ == ಉಲ್ಲೇಖಗಳು ==